|
ನಿರ್ವಹಣಾ ತಂಡ | ||||||||||
|
ಅನುರಾಗ್ ಡೊಡ್
ಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಅನುರಾಗ್ ಡೊಡ್ ರವರು ತಂತ್ರಾಂಶ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹತ್ತು ವರ್ಷಕ್ಕೂ ಹೆಚ್ಚಿನ ಅನುಭವ ಉಳ್ಳವರಾಗಿದ್ದಾರೆ. ಇದರ ಜೊತೆಗೆ ಎರಡು ಸಂಸ್ಥೆಗಳನ್ನು ಆರಂಭಿಸಿದ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ವೈಸ್ ನೆಟ್ ಸರ್ಚ್ ಇಂಜಿನ್ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಮ್ಯಾನೇಜರ್ ಹುದ್ದೆಯನ್ನು ನಿರ್ವಹಿಸುತ್ತಿದ್ದಾಗ ಅನುರಾಗ್ ಅವರು ಕೋರ್ ಶೋಧಕ ತಂತ್ರಾಂಶವನ್ನು ಅಭಿವೃಧ್ದಿ ಪಡಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದು ಇವರು ಈ ತಂತ್ರಜ್ಞಾನದ ಸ್ವಾಮ್ಯ ಒಡೆತನದ ಹಕ್ಕು ಪಡೆಯುವ ಹಾದಿಯಲ್ಲಿದ್ದಾರೆ. 2002ರಲ್ಲಿ ಲುಕ್ ಸ್ಮಾರ್ಟ್ ಸಂಸ್ಥೆ ವ್ಯಸ್ ನೆಟ್ ಸಂಸ್ಥೆಯ ಒಡೆತವನ್ನು ತನ್ನದಾಗಿಸಿಕೊಂಡಿತ್ತು. ಈ-ಬೇ, ಸಿನಾಪ್ಸಿಸ್ ಮತ್ತು ಡೆಲ್ ಸಾಪ್ಟ್ ನಲ್ಲಿ ಹಿರಿಯ ಇಂಜಿನಿಯರಿಂಗ್ ಹುದ್ದೆಗಳನ್ನು ಇವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಐಐಟಿ ದೆಹಲಿಯಿಂದ ಬಿ.ಟೆಕ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಅನುರಾಗ್ ರವರು ಆಮೇರಿಕದ ಆನ್ ಅಬ್ರಾರ್ ನಲ್ಲಿರುವ ಮಿಷಿಗನ್ ವಿಶ್ವವಿದ್ಯಾಲಯದಿಂದ ಗಣಕ ಯಂತ್ರ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿ ಕೊಂಡಿದ್ದಾರೆ. ಐಐಟಿ ದೆಹಲಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಬೇಸಿಗೆ ಪದವಿ ಪೂರ್ವ ಸಂಶೋಧನೆ ಪ್ರಶಸ್ತಿಯನ್ನು ಪಡೆದುಕೊಂಡ ಶ್ರೇಯಸ್ಸು ಅವರದಾಗಿದೆ. |